Index   ವಚನ - 511    Search  
 
ಪರಿಪೂರ್ಣ ಜ್ಞಾನ ಸ್ವರೂಪವಾಗಿ ಸಮಸ್ತವು ತನಗೆ ಸೃಜಿಸಬೇಕಾದ ವಸ್ತುವಾಗಿ ಸರ್ವಕರ್ತೃವಾಗಿ ಪ್ರಕೃತಿ ತತ್ತ್ವಕಿಂದವು ಮೇಲಾದ ಶಿವಸ್ವರೂಪವಾಗಿ ತಾವರೆಯ ಕಾವಿಗೆ ನೂಲಿಗೆ ಸರಿಯಾದ ಪರಂಜ್ಯೋತಿಯನು ಶಿವಯೋಗವ ಬಲ್ಲವರಲ್ಲಿ ಶ್ರೇಷ್ಠನಾದಾತನು ಧ್ಯಾನವ ಮಾಡುವುದಯ್ಯ ಶಾಂತವೀರೇಶ್ವರಾ