Index   ವಚನ - 512    Search  
 
ಆಧಾರ ಚಕ್ರದಿಂದ ವರ್ಣಾಶ್ರಮಧರ್ಮ ಮೊದಲಾದ ವ್ಯವಹಾರವು ಹುಟ್ಟುವದು. ಸ್ವಾಧಿಷ್ಠಾನದಿಂದ ಮಾಯಾರೂಪವಾದ ಠಕ್ಕು ಸಪ್ತ ವ್ಯಾಸನಂಗಳು, ಅಜ್ಞಾನ ಮೊದಲಾದ ಪ್ರಪಂಚವು ಹುಟ್ಟುತ್ತಿಹವು. ಅನಂತರದಲ್ಲಿ ನಾಭಿಸ್ಥಾನದಿಂದ ತಮೋಗಣವು ಅಷ್ಟಮದ ಮೊದಲಾದವು ಅಗುವವು. ಅನಾಹತಚಕ್ರದಿಂದ ಕ್ಷುತ್ತು ಪಿಪಾಸೆ ಶೋಕ ಮೋಹ ಜನನ ಮರಣವೆಂಬ ಷಡೂರ್ಮೆ ಮೊದಲಾದವು ಹುಟ್ಟುವವು. ಹೃದಯಚಕ್ರ ಸ್ಥಾನದಲ್ಲಿ ಶಾಂತಿ ಕರುಣ ಮೊದಲಾದವು ಹುಟ್ಟುತ್ತವೆ. ಶಬ್ದಶಕ್ತಿ ವಿರಕ್ತಿ ಮೊದಲಾದ ಕರ್ಮವು ಕಂಠಸ್ಥಾನದಲ್ಲಿ ಹುಟ್ಟುವವು. ಅರಿವು ಬುದ್ಧಿ ಸಮರ್ಥಿಕ ಮೊದಲಾದ ಕರ್ಮವು ಭ್ರೂಮಧ್ಯದಲ್ಲಿ ಹುಟ್ಟುವುವಯ್ಯ ಶಾಂತವೀರೇಶ್ವರಾ