ಆ ಅಷ್ಟ ಸ್ಥಾನಂಗಳೊಳಗೆ ಆಧಾರ
ಸ್ವಾಧಿಷ್ಠಾನವೆಂಬೆರಡು ಧರ್ಮಾಸ್ಥಾನ.
ನಾಭಿ ಶಕ್ತಿಗಳೆಂಬೆರಡು ಮಾಯಾಸ್ಥಾನ.
ಹೃದಯ ಕಂಠಗಳೆಂಬರಡು ಶಕ್ತಿಸ್ಥಾನ.
ಆಗ್ನೇಯ ಬ್ರಹ್ಮರಂಧ್ರವೆಂಬೆರಡು ವಿರುಕ್ತಿಸ್ಥಾನ.
ಮೊದಲು ನಾಲ್ಕು ಸ್ಥಾನಗಳಿಂದ ಸಂಸಾರವು ಹುಟ್ಟುತ್ತಿಹುದು
ಮೇಲಣಸ್ಥಾನ ನಾಲ್ಕರಿಂದ
ನಿಃಸಂಸಾರತ್ಯ ಆಗುವದಯ್ಯ ಶಾಂತವೀರೇಶ್ವರಾ