ಕುಂಡಲಿ ಎಂಬ ಹೆಸರುಳ್ಳ ಅಧಿಕವಾದ ನಾಡಿಯು
ನಾಭಿ ಸ್ಥಾನದಲ್ಲಿರುತ್ತಿಹುದು.
ಆ ನಾಡಿಯ ಮಧ್ಯದಲಿ ಕುಂಡಲಿ ಎಂಬ ಶಕ್ತಿಯು
ಸುತ್ತಿದ ಸರ್ಪದ ಹಾಂಗೆ ಎಂಟು ಸುತ್ತುಗಳೊಡನೆ ಕೂಡಿ
ನಿದ್ರೆಗೈಯ್ವುತ್ತಿರ್ದ ಸರ್ಪನ ಹಾಗೆ
ಉಸುರ ಬಿಡುವ ಆವಾಗಳೂ ಎಚ್ಚತ್ತಿರ್ದ,
ಕಾಂತಿಯಿಂದ ದೀಪಸುತ್ತಿರ್ದ,
ಕುಂಡಲಿ ಎಂಬ ಶಕ್ತಿಯು ನಾಭಿಯಲ್ಲಿ
ಆವಾಗಲೂ ಇರುತ್ತಿಹುದಯ್ಯ
ಶಾಂತವೀರೇಶ್ವರಾ