ಇನ್ನು ಶಿವಯೋಗೀಶ್ವರನ ಕ್ರಿಯಾ ಸಮಾಧಿ ಎಂತಂದೊಡೆ:
‘ಎಲೆ ಕುಮಾರ, ದೇಹದಲ್ಲಿ ಮುಕ್ತರು ಕೆಲಂಬರು,
ಲಿಂಗದಲ್ಲಿ ಮುಕ್ತರು ಕೆಲಂಬರು,
ನಿರಾಕಾರ ವಸ್ತುವಿನಲ್ಲಿ ಕೆಲಂಬರು ಮುಕ್ತರಹರು.
ಅವರು ಜ್ಞಾನಮೃತ ತೃಪ್ತಿಯನೈದಿದ ಬಂಧರಹಿತರೆಂದು
ಈಶ್ವರನು ನಿರೂಪಿಸಿರುವನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Innu śivayōgīśvarana kriyā samādhi entandoḍe:
‘Ele kumāra, dēhadalli muktaru kelambaru,
liṅgadalli muktaru kelambaru,
nirākāra vastuvinalli kelambaru muktaraharu.
Avaru jñānamr̥ta tr̥ptiyanaidida bandharahitarendu
īśvaranu nirūpisiruvanayya
śāntavīrēśvarā