Index   ವಚನ - 527    Search  
 
ಲಿಂಗದಲ್ಲಿ ಪ್ರಾಣವು, ಪ್ರಾಣದಲ್ಲಿ ಲಿಂಗವು ಶ್ರೀಗುರು ಪ್ರತಿಷ್ಠಿಸುತ್ತಿರಲು, ಆ ಲಿಂಗಾಂಗಿಯ ಕಾಯ[ದಲಿ] ಲಿಂಗವನು ನಿಕ್ಷೇಪಿಸುವುದ, ಲಿಂಗವಬಿಟ್ಟು ಕಾಯವ ನಿಕ್ಷೇಪಿಸಲಾಗದು; ಅಥವ ನಿಕ್ಷೇಪಿಸಿದರೆ, ಬದುಕಿರುವಾಗ ಕಾಯ ಲಿಂಗವನು ಅಗಲಿಸಲು ಹೇಂಗೆ ವ್ರತಭಂಗದೋಷವೊ ಹಾಂಗೆ ವ್ರತಭಂಗದೋಷವಾಗುವುದಯ್ಯ ಶಾಂತವೀರೇಶ್ವರಾ