Index   ವಚನ - 534    Search  
 
ಸರ್ವಾಂಗ ಲಿಂಗ ಸಂಬಂಧವಾದ ಷಟ್ಸ್ಥಲಬ್ರಹ್ಮಮೂರ್ತಿಗಳ ದೇಹಕ್ಕೆ ಲೌಕಿಕರಂತೆ ನಾಶವಿಲ್ಲ; ಸುಟ್ಟುದ ಸುಡುವುದಿಲ್ಲ, ಅಟ್ಟುದ ಅಡುವುದಿಲ್ಲ. ಶಿವೋಪದೇಶವೆಂಬ ಜ್ಞಾನಾಗ್ನಿಯಿಂ ದಹಿಸಿದಂಥ ದೇಹವು ಮರಳಿ ದಹಿಸಲಾಗದು. ಅದು ಕಾರಣ ಸಮಾಧಿಯೆ ಅಧಿಕ. ಶಿವಯೋಗೀಶ್ವರನು ಆವಾಗ ದೇಹವನು ಶಿವಂಗರ್ಪಿಸಿದನೊ ಆಗಳೆ ಆ ದೇಹವು ಶಿವಸ್ರರೂಪವಾಯಿತ್ತಯ್ಯ ಶಾಂತವೀರೇಶ್ವರಾ