Index   ವಚನ - 533    Search  
 
ಇನ್ನು ಲಿಂಗೈಕ್ಯರ ಸಮಾಧಿ ಎಂತೆನೆ, ಇಷ್ಟಲಿಂಗ ಭಿನ್ನವಾದರೂ ಚೋರ ಮೂಷಕಾದಿಗಳಿಂದ ಅಪಹರಿತವಾದರೂ ಆವ ಪ್ರಕಾರದಿಂದ ದೊರೆಯದಿರಲು ಆಪ್ತರಿದ್ದಲ್ಲಿ ವಸ್ತುವ ಬಿಡುವುದು. ಆಪ್ತರಿಲ್ಲದೊಡೆ ನೀರು ನೇಣು ವಿಷ ಔಷಧಿಗಳಲ್ಲಿ ಪ್ರಾಣ ತ್ಯಾಗವ ಮಾಡುವುದು. ಇದಕ್ಕೆ ಸಂಶಯವಿಲ್ಲ. ಆವ ಪ್ರಕಾರದಲ್ಲಿ ಪ್ರಾಣ ಬಿಟ್ಟರೂ ಸಂಶಯವಿಲ್ಲ. ಲಿಂಗೈಕ್ಯವೆ ಅಹುದು. ಈ ವಾಕ್ಯ ಸಮ್ಮತವಿಲ್ಲದಿರ್ದೊಡೆ ‘ಅಮುಗೇಶ್ವರನ ವಚನ’ದಲ್ಲಿ ತಿಳಿದುಕೊಳ್ಳುವದು ಶಾಂತವೀರೇಶ್ವರಾ