Index   ವಚನ - 536    Search  
 
ಅಜ್ಞಾನವೆಂಬ ರಾಕ್ಷಸನಿಗೆ ನಯನೋನ್ಮಿಲವನು ಮಾಡಿ ಒಡ್ಡೈಸಿದ ಸಂಸಾರವೆಂಬ ಕತ್ತಲೆಗೆ ಶಿವಧ್ಯಾನವು ಪ್ರಚಂಡ ಸೂರ್ಯನಾಗಿರ್ದುದಯ್ಯ. ಪ್ರಾಣಲಿಂಗದಲ್ಲಿ ನಿಷ್ಠೆ ಉಳ್ಳಾತನ ಶರೀರವನು ವಾಯ ಸೋಂಕಿ ಆವ ಠಾವಿಗೆ ಬೀಸಿದರೂ ಅಲ್ಲಿರ್ದ ಮನುಷ್ಯರು ಮುಕ್ತರಯ್ಯ ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಶಿವಯೋಗ ಸಮಾಧಿಯಲ್ಲಿ ನಿಷ್ಠನಾದ ಪ್ರಾಣಲಿಂಗಯ ಮನಸ್ಸಿನಲ್ಲಿ ಮನೋಮೂರ್ತಿಯಾಗಿ ಇರುವ ಲಿಂಗದ ಸಹಜ ಸ್ವರೂಪವು ಎಂತೆಂದೊಡೆ ಮುಂದೆ ‘ಲಿಂಗನಿಜಸ್ಥಲ’ವಾದುದು.