ಆಕಾರಾಂಗನಾದ ಶರಣನಲ್ಲಿ
ಐಕ್ಯ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಎಂಬ
ಪಂಚಾಂಗವು ಅಡಗಿ
ಆ ಶರಣಂಗೆ ಪ್ರಸಾದಲಿಂಗವೆ ಸಂಬಂಧವಾಗಿ
ಪ್ರಸಾದಲಿಂಗದಲ್ಲಿಯೆ ಮಹಾಲಿಂಗ ಆಚಾರಲಿಂಗವು ಗುರುಲಿಂಗ
ಶಿವಲಿಂಗ ಜಂಗಮಲಿಂಗವೆನಿಸಿದ ಪಂಚಲಿಂಗವು ಲೀನವಾಗಿ
ಆ ಪ್ರಸಾದಲಿಂಗವೇ ಆಲಯವಾಗಿ
ಇಂತೀ ಷಡ್ವಿಧ ಲಿಂಗದಲ್ಲಿ ಯೋಗವಾಗಿ
ಅಭಿನ್ನವಾಗಿಪ್ಪಾತನೆ ಶರಣನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Ākārāṅganāda śaraṇanalli
aikya bhakta māhēśvara prasādi prāṇaliṅgi emba
pan̄cāṅgavu aḍagi
ā śaraṇaṅge prasādaliṅgave sambandhavāgi
prasādaliṅgadalliye mahāliṅga ācāraliṅgavu guruliṅga
śivaliṅga jaṅgamaliṅgavenisida pan̄caliṅgavu līnavāgi
ā prasādaliṅgavē ālayavāgi
intī ṣaḍvidha liṅgadalli yōgavāgi
abhinnavāgippātane śaraṇanayya
śāntavīrēśvarā