Index   ವಚನ - 550    Search  
 
ಅಕ್ರೋಧ ಆಚಾರ ಜಿತೇಂದ್ರಿಯತ್ವ ಕ್ಷಮೆ ದಯೆ ಸರ್ವಜನರಲ್ಲಿ ಪ್ರಿತಿ ನಿರ್ಮೋಹ ದಾನ ಸದ್ಗುಣ ಶೀಲ ಇಂತೀ ದಶ ಚಿಹ್ನಂಗಳು ಶರಣನ ಜ್ಞಾನ ಕುರುಹಯ್ಯ. ಶಿವನೆ ಜ್ಯೋತಿಸ್ವರೂಪನು ಅನ್ಯವಿಲ್ಲವೆಂಬ ಸ್ಥಿರಭಾವನೆ ಶೀಲವು ಸಮಸ್ತ ಕರ್ಮಂಗಳಲ್ಲಿಯೂ ಚಿತ್ತ ಶುದ್ಧಿಯೆ ಶೌಚವು, ಚಿಜ್ಜಲದಿಂದ ವೈರಾಗ್ಯವೆಂಬ ಮೃತ್ತಿಕೆಯಿಂದ ಪುರುಷರುಗಳ ಅಜ್ಞಾನಂಗಳೆಂಬ ಮಲತ್ರಯಂಗಳ ಲೇಪನದ ದುರ್ಗಂಧವು ಶುದ್ಧವಹುದಯ್ಯ. ಲಿಂಗದೊಡಗೂಡಿದ ಸನ್ಮಾರ್ಗವು ಶರಣನ ಲೋಕ. [ಲೋಕ] ಮಾರ್ಗವನು ಬಿಟ್ಟು ಶಿವಜ್ಞಾನಿಗಳ ಸಮ್ಮೇಳವನು ಬಯಸುವವನಾಗಿ ಚರಿಸುತ್ತಿಹನಯ್ಯ ಶಾಂತವೀರೇಶ್ವರಾ