Index   ವಚನ - 551    Search  
 
ಅದು ಕಾರಣವಾಗಿ ಸಮಸ್ತ ಪ್ರಯತ್ನದಿಂದ ಶಿವನನು ರಕ್ಷಕನನ್ನಾಗಿ ಸ್ವೀಕರಿಸಿ ಸಂತೋಷ ಸುಖ. ಲಾಭಫಲವನನುಭವಿಸುವ ಶರಣನೆ ಅಧಿಕವಾದ ಸಖಿ. ಶಿವನೊಡನೆ ಕೂಡಿ ಒಂದೆಯಾದವನಾಗಿ ಶಿವನಾಗಿ ಐಕ್ಯನೆಂದು ಹೇಳುವರು ಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಶರಣಸ್ಥಲದಲ್ಲಿ ಮಹಾಜ್ಞಾನದಿಂದ ತನ್ನ ಸ್ವರೂಪವನರಿದು ಶರಣನು ತನ್ನ ತಾನರಿದೆನೆಂಬರಿವಿನ ಮುಂದೆ ಇದಿರಿಟ್ಟು ತೋರಿದ ‘ತಾಮಸ ನಿರಸನ ಸ್ಥಲ’ ತಮೋ ನಿರಸನವಂ ಮಾಡುತ್ತಿಹುದು. ಮುಂದೆ ತಾಮಸನಿರಸನಸ್ಥಲವಾದುದು.