Index   ವಚನ - 556    Search  
 
ಆಶಾ ಜೀವರು ತಮ್ಮ ಸ್ಥಾನವನು ಬಿಟ್ಟು ಅಶನ ವಸನವನೀವರ ಸ್ಥಾನವನು ಆಶ್ರಯಿಸುವರು. ಹೆಣ್ಣು ಹೊನ್ನು ವಸನಂಗಳ ಲಬ್ಧಿಗೋಸ್ಕರವೆಯ್ದುವರು. ಶಿವಯೋಗಿಯು ಜಗದ್ವರ್ತನೆಯನು ಬಿಟ್ಟು ಶಿವಜ್ಞಾನಿಗಳ ಸಂಗವ ಬಯಸಿದವನಾಗಿ ಎಯ್ದುತ್ತಿಹನಯ್ಯ ಶಾಂತವೀರೇಶ್ವರಾ