Index   ವಚನ - 557    Search  
 
ಭಸಿತವ ಹೊಸಿ ಬತ್ತಲೆ ಇದ್ದರೇನು ದಿಗಂಬರಿಯೆ? ಅಶನವನುಂಡ ವ್ಯಸನವ ತೊರೆದರೇನು ಬ್ರಹ್ಮಚಾರಿಯೇ? ಭಾವ ಬತ್ತಲೆ ಮನ ದಿಗಂಬರರಾದೊಡೆ ಅದೆ ಸಹಜ ನಿರ್ವಾಣ. ಅಶನ ದೊರೆಯದೊಡೆ ಉಪವಾಸಿ ಎಂದು, ವ್ಯಸನದಾಸೆಯಾದೊಡೆ ಜಿತೇಂದ್ರಿಯನೆಂದು ವಸನ ದೊರೆಯದೊಡೆ ದಿಗಂಬರಿ ಎಂದು ಅಶನ ವ್ಯಸನ ವಸನಂಗಳ ಕಾಂಕ್ಷೆಗೆ [ಸುಳಿವ] ವೃಥಾ ವೇಷಧಾರಿಗಳಲ್ಲಿ ಶಿವನಿಲ್ಲವಯ್ಯ ಶಾಂತವೀರೇಶ್ವರಾ