Index   ವಚನ - 559    Search  
 
ಜ್ಞಾನವೆ ಗುರು ಆಚಾರವೆ ಛಾತ್ರ ವಿರಕ್ತಿಯೇ ವನಿತೆ. ಲಿಂಗಾಂಗ ಸಮರಸೈಕ್ಯವೆ ಯೋಗ! ವಿಷಯಂಗಳೆ ಲಿಂಗಾರ್ಪಿತ. ಈ ಲಿಂಗ ಪ್ರಸಾದ ಭೋಗವೆ ಆನಂದ. ಸುಜ್ಞಾನವೆ ತೃಪ್ತಿ ಕರಣಂಗಳ ನಿವೃತ್ತಿಯೆ ಬೋಳು. ಪರಶಿವ ಲಿಂಗವೆ ಪಾಣಿಪತ್ರೆ, ಶಾಂತೀಯೇ ಭಸ್ಮೋದ್ಧೂಳನ, ಶುಚಿತ್ತವೆ ಮಣಿಭೂಷಣವಯ್ಯ ಶಾಂತವೀರೇಶ್ವರಾ