Index   ವಚನ - 574    Search  
 
ಲಿಂಗಾಂಗ ಜ್ಞಾನ ಒಂದರಲ್ಲಿಯೆ ತತ್ಪರನಾಗಿ ಸಮಸ್ತ ಜಗತ್ತಿಗೆ ಒಡೆಯನಾದ ಪರಮೇಶ್ವರನನು ‘ರಕ್ಷಿಸು’ ಎಂದು ಮೊರೆ ಹೊಕ್ಕ ‘ಶರಣಸತಿ’ ಲಿಂಗಪತಿ’ಯೆಂಬ ದೃಡಭಾವವುಳ್ಳ ಶಿವಲಿಂಗ ಒಂದರಲ್ಲಿಯ ನಿಷ್ಠಯಿಂದ ಮಾಡಿದ ಶೀಲವೆ ಅಲಂಕಾರವಾಗುಳ್ಳ ಈ ಶರಣನು ಲಿಂಗೈಕ್ಯ ಉಳ್ಳಾತನೆಂದು ಹೇಳುವರಯ್ಯಶಾಂತವೀರೇಶ್ವರಾ ಸೂತ್ರ: ಈ ಪ್ರಕಾರದಿಂದ ಶರಣಸ್ಥಲದಲ್ಲಿ ಮಹಾಜ್ಞಾನದಿಂದಾಚರಿಸಿ ಸಮಸ್ತ ಸಂಶಯವನು ಪರಿಹರಿಸ ನಿಜಸ್ವರೂಪವನು ಸಾಕ್ಷಾತ್ಕರಿಸಿ ಪರಮಾನಂದ ಸ್ವರೂಪ ಶರಣನು ತನ್ನ ತಾನರಿದೆನೆಂಬಾತ್ಮಜ್ಞಾನವನು ಮರೆದು ಆ ಮರವೆಯನು ಕೆಡಿಸಿ ಮಹಾಲಿಂಗೈಕ್ಯವನು ಐಯ್ದಿದ ಭೇದವೆಂತೆನೆ ಮುಂದೆ ‘ಐಕ್ಯಸ್ಥಲ’ವಾದುದು.