Index   ವಚನ - 573    Search  
 
ಪರುಷ ಮುಟ್ಟಿದ ಲೋಹವೆಲ್ಲ ಸುವರ್ಣವಾದಂತೆ, ಅಗ್ನಿ ಮುಟ್ಟಿದ ಕಾಷ್ಠವೆಲ್ಲ ಅಗ್ನಿಯಾದಂತೆ. ಅಂಬುಧಿಯನೆಯ್ದಿದ ನದಿಗಳೆಲ್ಲ ಅಂಬುನಿಧಿಯಾದಂತೆ ಪ್ರಸಾದವ ಸೋಂಕಿದ ಸಮಸ್ತ ಪದಾರ್ಥಂಗಳು ಪ್ರಸಾದವೆ ಅಯ್ಯ ವಿದ್ಯಾಭ್ಯಾಸಿಗಳಿಗೆ ಪಲಂಡುಯಾವನಾಳ ಚೂರ್ಣಂಗಳಿಂ ಜಾಡ್ಯಾ. ಯೋಗಭ್ಯಾಸಿಗಳಿಗೆ ಪಿಣ್ಯಾಕ ಲಶುನ ಹುರಳಿ ಹುಗ್ಗಿಗಳಿಂ ದೋಷವಪ್ಪುದಾಗಿ ಸಲ್ಲದು. ಶರಣಸ್ಥಲದವರು ಸರ್ವವನು ಶಿವಾರ್ಪಣವ ಮಾಡಲೇಬೇಕು ಬಿಡಬೇಕೆಂಬ ಶೀಲವಿಲ್ಲವಯ್ಯ. ಅದು ಕಾರಣ ಒಲ್ಲೆನೆಂಬುದು ವೃಥಾ ವೈರಾಗ್ಯ; ಬೇಕೆಂಬುದು ಜೀವಗಣ; ಆವ ಪದಾರ್ಥವಾದರೂ ತಾನಿರ್ದೆಡೆಗೆ ಬಂದರೆ ಲಿಂಗಾರ್ಪಣವ ಮಾಡುವುದೆ ಆಚಾರವಯ್ಯ ಶಾಂತವೀರೇಶ್ವರಾ