Index   ವಚನ - 579    Search  
 
ಧರ್ಮಾಧರ್ಮ ಕರ್ಮಂಗಳಿಗೆ ಕರ್ತೃವಾನೆಂಬ ಅಭಿಮಾನಿಸುವುದೀಗ ಕರ್ಮಕಾಂಡ, ಅಧರ್ಮಾಧರ್ಮ ಕರ್ಮಂಗಳಿಗೆ ಕರ್ತೃ ನಾನಲ್ಲ, ಆ ಕೃತ್ಯತ್ವಕ್ಕೆ ಶಿವನೆ ಸಾಕ್ಷಿಕನೈಸೆ ಎಂದು ಅಭಿಮಾನಿಸುವುದೀಗ ಜ್ಞಾನಕೊಂಡ. ಆ ಧರ್ಮಾಧರ್ಮಗಳಿಗೆ ಕರ್ತೃವು ನಾನಲ್ಲ! ಸಾಕ್ಷಿಯೂ ನಾನಲ್ಲ. ಅದಕ್ಕೆ ಶಿವನೆ ಕರ್ತೃ ಶಿವನೆ ಸಾಕ್ಷಿಕನೆಂದು ಆ ಉಭಯಾಭಿಮಾನ ರಹಿತವಾಗಿ ಇಹಂಥಾದುದೆ ಭಕ್ತಿಕಾಂಡವೆಂದು ಶಿವಾಚಾರ್ಯರು ನಿರೂಪಿಸಿರುವರಯ್ಯ ಶಾಂತವೀರೇಶ್ವರಾ