Index   ವಚನ - 584    Search  
 
ಭೋಕ್ತೃವೂ ಭೋಜಯಿತೃವೂ ಭೋಗವೂ ಭೋಗೋಪಕರಣಂಗಳೂ ಇವೆಲ್ಲವೂ ಪರಮೇಶ್ವರನ ಪ್ರಸಾದ ಭಾವದಿಂದ ತನ್ನ ಸ್ವರೂಪವಾಗಿಯೇ ತೋರುತ್ತಿಹವು. ಜೀವಾತ್ಮನೂ ಪರಮಾತ್ಮನೂ ಇವರಿಬ್ಬರ ಭೇದವೂ ಆ ಭೇದಕನೂ ಈ ಎಲ್ಲವೂ ಪರಮೇಶ್ವರನ ಪ್ರಸಾದ ಭಾವದಿಂದ ತನ್ನ ಸ್ವರೂಪವಾಗಿಯೆ ಒಪ್ಪುವವು. ಶರೀರವು ಇಂದ್ರಿಯವು ಪ್ರಾಣಂಗಳು ಮನಸ್ಸು ಅಹಂಕಾರ ಬುದ್ಧಿಯು ಇವೆಲ್ಲವೂ ಪರಮೇಶ್ವರನ ಪ್ರಸಾದ ಭಾವದಿಂದ ತನ್ನ ಸ್ವರೂಪವಾಗಿಯೇ ಪ್ರಕಾಶಿಸುತ್ತಹವು. ನಿಧಿಯೂ ನಿಷೇಧವೂ ನಿಷಿದ್ಧ ಕಾರಣವೂ ಇವೆಲ್ಲವೂ ಪರಮೇಶ್ವರನ ಪ್ರಸಾದ ಭಾವದಿಂದ ತನ್ನ ಸ್ವರೂಪವಾಗಿಯೇ ಒಪ್ಪುತ್ತಿಹವಯ್ಯ ಶಾಂತವೀರೇಶ್ವರಾ