Index   ವಚನ - 586    Search  
 
ಮಾನುಷ್ಯ ಚರ್ಮಾವೃತನಾದ ಭಕ್ತನು ಶ್ರದ್ಧೆ ನೈಷ್ಠೆ ಸಾವಧಾನ ಅನುಭಾವ ಆನಂದವೆಂಬ ಪಂಚವಿಧ ಅಸಿಪದದಿಂದ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗದಲ್ಲಿ ಕೂಡಿ ಅಪೂರ್ವಸ್ಥಲಂಗಳ ವರ್ತನೆಯನು ಪಂಚಲಿಂಗದಲ್ಲಿ ವಿಶ್ರಾಂತಿಯನೆಯ್ದಿಸಿ ಸಮರಸ ಭಕ್ತಿಯಂದೆ ಐಕ್ಯಸ್ಥಲವನು ಆಶ್ರಯಿಸಿ ಮಹಾಲಿಂಗದಲ್ಲಿ ಐಕ್ಯನಾಗುವನಯ್ಯ ಶಾಂತವೀರೇಶ್ವರಾ