ಪಂಚಾಚಾರ ಶುದ್ಧವಾದ ಸದ್ಭಕ್ತಂಗೆ,
ಪಾದತೀರ್ಥಪ್ರಸಾದದಲ್ಲಿ ನಿರತಂಗೆ,
ಆವ ವ್ರತ ನೇಮವ ನಡೆಸುವ ಸದೈವಂಗೆ
ಆತನ ಸುಕಾಯಕದ ಇರವೆಂತೆಂದಡೆ!
ತಾ ದೃಷ್ಟದಲ್ಲಿ ಕಾಬ ಪ್ರಾಣಿಗಳ ಕೊಲ್ಲದೆ,
ಕೊಲ್ಲುವುದಕ್ಕೆ ಒಡಂಬಡದೆ,
ತಾ ಮಾಡುವ ಕಾಯಕದಲ್ಲಿ
ಅಧಮ ವಿಶೇಷವೆಂಬುದನರಿತು,
ನಡೆನುಡಿ ಸಿದ್ಧಾಂತವಾಗಿ
ಲಿಂಗವ ಒಡಗೂಡಿಪ್ಪ ಕಾಯಕದಿರವೆಂತೆಂದಡೆ:
ನಿರತವಾಗಿ ಆ ಮುಖದಿಂದ ಬಂದ ದ್ರವ್ಯದ
ಗುರುಲಿಂಗಜಂಗಮದ ಮುಂದಿಟ್ಟು
ಆ ಪ್ರಸಾದಮಂ ಕೊಂಡ ಸದ್ಭಕ್ತನ ಪ್ರಸಾದವ ಕೊಂಡ
ಗುರುವಿಂಗೆ ಇಹಸುಖ, ಲಿಂಗಕ್ಕೆ ಪರಸುಖ,
ಜಂಗಮಕ್ಕೆ ಪರಮಸುಖ.
ಆಚಾರವೆ ಪ್ರಾಣವಾದ ರಾಮೇಶ್ವರಲಿಂಗಕ್ಕೆ
ಆ ಪ್ರಸಾದವೆ ಪರಮಪದ.
Art
Manuscript
Music
Courtesy:
Transliteration
Pan̄cācāra śud'dhavāda sadbhaktaṅge,
pādatīrthaprasādadalli nirataṅge,
āva vrata nēmava naḍesuva sadaivaṅge
ātana sukāyakada iraventendaḍe!
Tā dr̥ṣṭadalli kāba prāṇigaḷa kollade,
kolluvudakke oḍambaḍade,
tā māḍuva kāyakadalli
adhama viśēṣavembudanaritu,
naḍenuḍi sid'dhāntavāgi
liṅgava oḍagūḍippa kāyakadiraventendaḍe:
Niratavāgi ā mukhadinda banda dravyada
guruliṅgajaṅgamada mundiṭṭu
ā prasādamaṁ koṇḍa sadbhaktana prasādava koṇḍa
guruviṅge ihasukha, liṅgakke parasukha,
jaṅgamakke paramasukha.
Ācārave prāṇavāda rāmēśvaraliṅgakke
ā prasādave paramapada.