Index   ವಚನ - 88    Search  
 
ಪಂಚಾಚಾರಶುದ್ಧವಾಗಿ ಇರಬೇಕೆಂಬರಲ್ಲದೆ, ಪಂಚಾಚಾರದ ವಿವರವನರಿಯರು ನೋಡಾ! ತಮ್ಮ ಸ್ವಯಾಯತವೆಂಬುದನರಿಯದೆ ಉಂಡಲ್ಲಿ, ತಮ್ಮ ಲಿಂಗಕ್ಕೆ ಅಲ್ಲದುದ ವಾಸಿಸಿದಲ್ಲಿ, ತಮ್ಮ ವ್ರತಾಚಾರಕ್ಕೆ ಸಲ್ಲದುದ ನಿರೀಕ್ಷಿಸಿದಲ್ಲಿ, ತಮ್ಮಾಯತಕ್ಕೊಳಗಲ್ಲದ ಕುಶಬ್ದವ ಕೇಳಿ ಒಪ್ಪಿದಲ್ಲಿ, ತಮ್ಮ ಲಿಂಗಾಯತಕ್ಕೆ ಹೊರಗಾದುದ ಮುಟ್ಟಿ ಅಂಗೀಕರಿಸಿದಲ್ಲಿ, ಇಂತೀ ಪಂಚಾಚಾರದಲ್ಲಿ ಶುದ್ಧತೆಯಾಗಿ ಗುರುಲಿಂಗಜಂಗಮ ಪಾದತೀರ್ಥ ಪ್ರಸಾದ ಇಂತೀ ವರ್ತನ ಪಂಚಾಚಾರಶುದ್ಧವಾಗಿ, ಬಾಹ್ಯ ಅಂತರಂಗದಲ್ಲಿ ಉಭಯನಿರತವಾಗಿ, ನಿಂದುದು ವ್ರತವಲ್ಲದೆ, ಉಂಬ ಉಡುವ ಕೊಂಬ ಕೊಡುವ ಸಂದಣಿಗಾರರ ಶೀಲ ಹಿಂದೆ ಉಳಿಯಿತ್ತು, ಆಚಾರವೆ ಪ್ರಾಣವಾದ ರಾಮೇಶ್ವರಲಿಂಗವ ಮುಟ್ಟದೆ.