ಶಿವಲಿಂಗದಲ್ಲಿಯ ಏಕಭಾವದಿಂದಾದ
ಶಿವತತ್ತ್ವವನುಳ್ಳ ಶಿವಲಿಂಗೈಕ್ಯನು ಜೀವನ್ಮುಕ್ತನಾಗಿ
ದೇಹವುಳ್ಳವನಾದರೂ
ಜಾತಿ ಜನ್ಮ ರಜೋಚ್ಛಿಷ್ಟ ಪ್ರೇತಾದಿ ಪಂಚಸೂತಕಗಳಿಂದ
ಸ್ವೇಚ್ಛಾರಗಳ ಲೇಪನವಿಲ್ಲದಿರುವವನು.
ಲಿಂಗೈಕ್ಯದಲ್ಲಿ ಮನಸ್ಸುಳ್ಳವರಿಗೆ ಶಿವಾದ್ವೈತ
ಜ್ಞಾನವು ಸ್ಥಿರವಾಗಲು ದುಃಕರ್ಮ
ಸತ್ಕರ್ಮ ಆ ದ್ವಂದ್ವ ಕರ್ಮಂಗಳು
ಹಾನಿವೃದ್ಧಿಗಳೇನು ಇಲ್ಲವಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivaliṅgadalliya ēkabhāvadindāda
śivatattvavanuḷḷa śivaliṅgaikyanu jīvanmuktanāgi
dēhavuḷḷavanādarū
jāti janma rajōcchiṣṭa prētādi pan̄casūtakagaḷinda
svēcchāragaḷa lēpanavilladiruvavanu.
Liṅgaikyadalli manas'suḷḷavarige śivādvaita
jñānavu sthiravāgalu duḥkarma
satkarma ā dvandva karmaṅgaḷu
hānivr̥d'dhigaḷēnu illavayya
śāntavīrēśvarā