Index   ವಚನ - 596    Search  
 
ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ, ನಿಃಕಲಲಿಂಗ, ಶೂನ್ಯಲಿಂಗ ನಿರಂಜನಲಿಂಗವೆಂಬ ನವಲಿಂಗಗಳನವರ ಮುಖಂಗಳ ನವವಿಧಾರ್ಪಣಂಗಳನು ಆವಾತನರಿಯುದಿಹನು, ಆತನು ಎಲ್ಲಾ ಇಂದ್ರಿಯಂಗಳಲ್ಲಿ ಹೀಂಗೆ ನಿರ್ಲೇಪನವನೆಯ್ದುತ್ತಿಹನು. ನಿರ್ಲೇಪತ್ವವನೆಯ್ದಲರಿಯನದು ಕಾರಣ ಗಂಧ ರಸ ರೂಪು ಸ್ಪರ್ಶ ಶಬ್ದ ರತಿ ಕ್ತಿಯೆಗಳಲ್ಲಿ ಏನೂ ಉಳಿಯದೆ ಲಿಂಗಾರ್ಪಿತ ಪ್ರಸಾದೋಪಭೋಗವೆ ‘ಕರ್ತವ್ಯ’ವೆಂದು ಹೇಳುವರು. ಈ ಹೀಂಗೆ ಆವನಾನೊಬ್ಬನು ತತ್ತ್ವವಿಧಾನದಿಂದ ಸರ್ವವೂ ಲಿಂಗಾರ್ಪಿತವೆಂದು ಗುರುಮುಖದಿಂದ ತಿಳಿವುತ್ತಿಹನು ಆತನು ಸಕಳ ಭೋಗಂಗಳ ಸಹಿತ ಭೋಗಿಸಿ ನಿರ್ಲೇಪನಾಗುತ್ತಿಹನಯ್ಯ ಶಾಂತವೀರೇಶ್ವರಾ