Index   ವಚನ - 597    Search  
 
ದ್ರವಂಗಳೆ ಆವುದಾನೊಂದು ರೂಪು, ಅರ್ಚನಾ ಕಾಲದಲ್ಲಿ ಲಿಂಗಮುಖಾರ್ಪಣವಾಗುತ್ತದೆ. ಆ ರೂಪೆ ಮರಳಿ ಅರ್ಚನಾಕಾಲ ಪರಿಯಂತರ ಪ್ರಸಾದವಾಗುತ್ತದೆ. ಆ ಲಿಂಗಾರ್ಚನೆಯವಸರದಲ್ಲಿ ಆವುದಾನೊಂದು ದ್ರವ್ಯವು ಸಮರ್ಪಿತವಾದುದು ಅದೇ ಶುದ್ಧವಾದುದು. ಲಿಂಗಾರ್ಚನೆಯ ಅವಸರವಲ್ಲದೆ ಅರ್ಪಿತವಾದ ದ್ರವ್ಯವು ಶುದ್ಧವಲ್ಲದ ದ್ರವ್ಯವೆನಿಸುವುದು. ಇಷ್ಟಲಿಂಗಾರ್ಪಿತವೆ ಶುದ್ಧ, ಪ್ರಾಣಲಿಂಗಾರ್ಪಿತವೆ ಸಿದ್ಧ. ಭಾವಲಿಂಗಾರ್ಪಿತವೆ ಪ್ರಸಿದ್ಧವೆಂದು ಹೇಳುವರಯ್ಯ ಶಾಂತವೀರೇಶ್ವರಾ