ಅಂಗದ ಮೇಲೆ ಪ್ರಾಣಲಿಂಗಪ್ರತಿಷ್ಠೆಯಾದ ಬಳಿಕ
ಲಿಂಗಕ್ಕೆಯೂ ತನಗೆಯೂ
ಏಕಭಾಜನವಲ್ಲದೆ ಭಿನ್ನ ಭಾಜನ ಉಂಟೆ?
ಲಿಂಗಕ್ಕೆಯೂ ತನಗೆಯೂ ಏಕಭಾಜನವಾಗದಿದ್ದರೆ
ಅಂಗ ಕರಣೇಂದ್ರಿಯಗಳಲ್ಲಿ ವಿಂಗವ ಧರಿಸಿಕೊಳ್ಳಬಹುದೆ?
ಇದನರಿದು ಏಕಭಾಜನವಾಗದಿರ್ದಡೆ ದೋಷ.
ಈ ಲಿಂಗಾಂಗೈಕ್ಯವನರಿಯದೆ
ಏಕಭಾಜನವಾದೊಡೆಯು ದೋಷ.
ಲಿಂಗಾಂಗವೆಂಬೆರಡು ಎಂದೆ
ಎಂದರಿದಾತಂಗಲ್ಲದೆ ಏಕಭಾಜನವಳಡದಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Aṅgada mēle prāṇaliṅgapratiṣṭheyāda baḷika
liṅgakkeyū tanageyū
ēkabhājanavallade bhinna bhājana uṇṭe?
Liṅgakkeyū tanageyū ēkabhājanavāgadiddare
aṅga karaṇēndriyagaḷalli viṅgava dharisikoḷḷabahude?
Idanaridu ēkabhājanavāgadirdaḍe dōṣa.
Ī liṅgāṅgaikyavanariyade
ēkabhājanavādoḍeyu dōṣa.
Liṅgāṅgavemberaḍu ende
endaridātaṅgallade ēkabhājanavaḷaḍadayya
śāntavīrēśvarā