Index   ವಚನ - 627    Search  
 
ಉಂಟೆಂಬ ಸಂಕಲ್ಪವು ಉಂಟಿಲ್ಲವೆಂಬ ವಿಕಲ್ಪವು ವ್ಯಕ್ತಾವ್ಯಕ್ತ ರೂಪವಾದ ಪದಾರ್ಥಂಗಳು ಆವಾತನಿಗೆ ಇಲ್ಲವೊ ಆತನು ಲಿಂಗದೊಡನೆ ಸಹಭೋಜನ ಯೋಗ್ಯನಯ್ಯ ಶಾಂತವೀರೇಶ್ವರಾ