Index   ವಚನ - 629    Search  
 
ಲಿಂಗದೊಡನೆ ಸಹಭೋಜನವ ಮಾಡುವ ಸದ್ಭಕ್ತನ ಆಚರಣೆ ಎಂತೆಂದೊಡೆ: ಜಂಗಮದ ಪಾದೋದಕವ ತನ್ನ ಇಷ್ಟಲಿಂಗಕ್ಕೆ ಮಜ್ಜನವ ಮಾಡಿ ಸ್ವೀಕರಿಸುವುದು. ಜಂಗಮದ ಕುಂದು ನಿಂದೆಯ ಕೇಳಲಾಗದು ಅಥವಾ ಕೇಳಿದೊಡೆ ನಿಂದಕನಂ ಕೊಲುವುದು; ಕೊಲದಿರ್ದೊಡೆ ತನ್ನ ತಾನಿರಿದುಕೊಂಡು ಸಾವುದು; ಸಾಯಲಾಗದಿರ್ದೊಡೆ ಅವನಂ ಬಯ್ವುದು. ಈ ಆಚರಣೆ ಉಳ್ಳೆಡೆ ಜಂಗಮದ ಪಾದೋದಕವ ಕೊಂಬುದು. ಇಲ್ಲದಿರ್ದೊಡೆ ಸುಮ್ಮನಿಹುದು. ಪಾದೋದಕವ ಕೊಳಲಾಗದು. ಜಂಗಮ ಪ್ರಸಾದವ ತನ್ನಿಷ್ಟಲಿಂಗಕ್ಕೆ ಸಮರ್ಪಿಸಿ ಕೊಂಬ ಪಾದೋದಕವೆಂಬುದು ಪರಬ್ರಹ್ಮವು. ನಿರ್ಮಲವು ಅಘನಾಶವು. ಅಜಡವಾದುದು. ಆ ಜಡರಹಿತವಾದ ಪಾದೋದಕವನು ಆವಾತನು ಜಡವೆಂದು ಇಚ್ಛಿಸುತ್ತಿದ್ದಾನೋ ಆ ಪಾಪಿಸಯು ಶಿವದ್ರೋಹಿಯಯ್ಯ ಶಾಂತವೀರೇಶ್ವರಾ