Index   ವಚನ - 630    Search  
 
ಇಂತಪ್ಪ ಪಾದತೀರ್ಥ ಪ್ರಸಾದವ ಕೊಡುವುದಕ್ಕೆ ಯೋಗ್ಯಾಯೋಗ್ಯರಾರೆಂದೊಡೆ, ಮಠಪತಿ ಬೋಧಿಸುವ ಜಂಗಮ, ಹಾಡುವ ಜಂಗಮ, ಬಾರಿಸುವ ಜಂಗಮ, ಅಂಗಹೀನ ಅನಾಚಾರಿ ಕಂಬಿಕಾರ ತಿರುಕರು ಜಂಗಮದೀಕ್ಷಿತರಾಗಿ ಓಲೇಕಾರನಾಗಿಹ, ವಾದಿ ಗರ್ವಿ ಅಧಿಕ ವ್ಯವಹಾರಿ ಧನಪಾಲಕರು ಇವು ಮೊದಲಾದ ನಾನಾ ವೇಷವ ಹೊತ್ತ ಜಂಗಮರೆಂದೆನಿಸಿ ದೀಕ್ಷಿತರಾಗಿ ಭೃಂಗಿಯರೆಂದೆನಿಸಿ ಪರಿಹಾಸಕರು ಹಾದರಿಗರು ಇಂಥ ಮರುಳ ಮಂಕನಲ್ಲಿ ಜಂಗಮದೇವರೆಂದು ಪಾದತೀರ್ಥ ಪ್ರಸಾದಂ ಪಡೆದ ಸೇವಿಸಿದೊಡೆ ಕೊಂಡಾತಂಗೆ ದೋಷ, ಕೊಟ್ಟಾತಂಗೆ ಪಾಪ. ಇಂತಿವರಲ್ಲಿ ತ್ರಿನೇತ್ರವಿದ್ದರೂ ಕೊಳಲಾಗದು. ಗ್ರಾಮದಲ್ಲಿ ಮಠದ ದೇವರಾಗಿ ಪರೋಪಕಾರಿಯಾಗಿ ಪರವ ಕಂಡಾತನಾದರೆ ಪಾದಪೂಜೆಗೆ ಸಲ್ವನು. ಅದರೊಳು ಸೋ….. ಮಾತ್ರ ಹೆಣ ಹಿಡಿದು ಹಸ್ತ ಪಾದವ ಬಳಲಿಸಿ ಪರವ ಕಂಡಾತನಾದರೆ ಪಾದಪೂಜೆಗೆ ಸಲುವನು. ತನ್ನ ಗುರುಸ್ವಾಮಿ ಪಾದಕರ್ತನಯ್ಯ ಶಾಂತವೀರೇಶ್ವರಾ