Index   ವಚನ - 633    Search  
 
ತೊಲಗಿದ ಸಮಸ್ತ ಜಗದ್ಬಾಧೆಯುಳ್ಳ ಕಲರಕಂಹಿತವಾದ ಚಿದಾಕಾಶ ಸ್ವರೂಪವಾದ ಮಹಾಲಿಂಗದಲ್ಲಿ ಅಂಗ ಶಬ್ದವಾಚ್ಯವಾದ ತನ್ನನ್ನು ಸ್ವರೂಪ ಸ್ವಭಾವದಿಂದ ಬೆರೆದಿದ್ದಾತನೆಂದು ಭಾವಿಸುವುದು. ಆ ಇದೆ ಸಮಸ್ತ ಜಗದ್ಭ್ರಾಂತಿಯನು ತೊಲಗಿಸುವ ‘ಪರಮ’ ಮುಕ್ತಿ ಎಂದು ಸತ್ಪುರುಷರು ಹೇಳುವರಯ್ಯ ಶಾಂತವೀರೇಶ್ವರಾ