Index   ವಚನ - 632    Search  
 
ಸರ್ವೋತ್ಕರ್ಷವಾದಾಜ್ಞೇಯವೆಂಬ ಊರ್ಧ್ವಹೃದಯಾಕಾಶದಲ್ಲಿ ಅರಿವೆ ಸ್ವರೂಪವಾಗುಳ್ಳ ಪರಮಾನಂದ ಸ್ವರೂಪವಾದ ಮಹಾಲಿಂಗವೆಂಬ ಸೂರ್ಯನಲ್ಲಿ ಅಡಗಿದ ಮನೋವ್ಯಾಪಾರ ಉಳ್ಳ ಲಿಂಗೈಕ್ಯರಿಗೆ ಕ್ರಿಯೆಗಳೆಲ್ಲವು ದಗ್ಧಪಟ ನ್ಯಾಯದಂತೆ, ಜ್ಞಾನ ಸ್ವರೂಪವಾಗಿಪ್ಪವು. ಪೃಥಿವ್ಯಪ್ತೇಜವಾಯ್ವಾಕಾಶ ಆತ್ಮರಂಬ ಆತ್ಮ ಷಡ್ಭೂತಂಗಳೆಲ್ಲವೂ ಕ್ರಮಾಲಂಕಾರದಿಂದೆ ಆಚಾರಲಿಂಗ ಗುರುಲಿಂಗ ಶಿವಲಿಂಗ ಜಂಗಮಲಿಂಗ ಪ್ರಸಾದಲಿಂಗ ಮಹಾಲಿಂಗಗಳಲ್ಲಿ ಅರ್ಪಿತವಾಗಿರ್ಪವಯ್ಯ ಶಾಂತವೀರೇಶ್ವರಾ