ನೈರುತ್ಯ ಭಾಗದಲ್ಲಿ ರಜತ ಕಳಸ.
ಸುರಹೊನ್ನೆಯ ಪುಷ್ಪದ ಪೂಜೆ. ಸುರಗಿಯ ತಳಿರು.
ಧವಳವೆಂಬ ಗಂಗೆ
ಹೇಮಗಿರಿಯೆ ಪರ್ವತ ಚೂತವೆಂಬ ವೃಕ್ಷ
ನಂದೆ ಎಂಬ ದೇನು ಪೃಥ್ವಿ ಭೂತ ಸಮಾನ ವಾಯು
ಕ್ರಿಯಾಶಕ್ತಿ ರುದ್ರತತ್ವ
ಸದ್ಯೋಜಾತ ಮುಖ ಸಾಮವೇದ ಶಾಖೆ
‘ಓಂ ಯಜ್ಞೇನ ಯಜ್ಞಮಯಂ ಓಂ ತದೇವಸ್ತನಿ ಧರ್ಮಣಂ ಪ್ರಥಮಂ
ನ್ಯಾಸತೇಹಾದಾಂತಾಯ ಹಿಮಂ ನಾಸ್ಯ ಓಂ ಛಂ ವತ್ರ ಪೂರ್ವೇಸಾಧ್ಯ
ಸಮಿತಿ ಸಂಬಾ ಸಿಪಿಂದ ಮತಿ ಸಂಪ್ರದೇವ್ಯೋದ್ಯೋಯಿ ದೇವ ಭೂಮಿ
ಜನಯಂ ದೇವಾಯಕ’ ಎಂದು ‘ಶಿ’ಕಾರದೇಹ ಶ್ವೇತವರ್ಣ ಕಾಸ್ಯಪರ
ಗೋತ್ರ ಅನುಷ್ಟುಪ್ ಛಂದಸ್ಸು ‘ಮ’ಕಾರ ಬೀಜಾಕ್ಷರ ಷಡಕ್ಷರ ಮಂತ್ರ
ಅಧಿದೇವತೆ ರುದ್ರನು.
ಅಲ್ಲಿಯ ಆಚಾರ್ಯರು ಏಕೋರಾಮಯ್ಯದೇವರು
ಆತನಂಗೆ ಶ್ಯಾಮವರ್ಣ, ಪ್ರಣವವೆ ಧ್ವಜವು. ಏಕ ಶಿಖೆ ಚಕ್ರ ಮುಕುಟ.
ಬೆತ್ತದಂಡ ವಿಚಾರ ಖರ್ಪರ ‘ಭಿಕ್ಷಾನ್ನ ದೇವಾನ್ನ ಶಿವಾ’ ಎಂಬ ಶಬ್ದ
ರಜತ ಮುದ್ರೆ ದೇಹದಲ್ಲಿ ಯಜ್ಞೋಪವೀತ ಸದ್ಯೋಜಾತ ಕಂಠದಲ್ಲಿ
ರತ್ನಗಂಬಳಿಯ ಗದ್ದುಗೆ ಶ್ವೇತಾಂಬರ ಬೆಳ್ಳಿಯ ಸೂಜಿ ಬಿಳಿಯ ದಾರ
ಅರುಹೆಂಬ ಸೂಜಿ ಪರವೆಂಬ ದಾರ ಉತ್ತಮಾಂಗದಲ್ಲಿ
ಧರಿಸಿದ ಪ್ರಾಣಲಿಂಗ ಭೋಗ ಮಲ್ಲಿಕಾರ್ಜುನದೇವರು.
ಗೋಮೇಧಿಕ ವರ್ಣ ಸದ್ಯೋಜಾತ ಮುಖ ಪಶ್ಚಿಮ ದಿಕ್ಕು
ಹಸ್ತಿ ವಾಹನ ಜ್ಞಾನ ಪೀಠಿಕೆ
ರತ್ನಗಂಬಳಿಯ ಗದ್ದುಗೆಯ ಮೇಲೆ ಭದ್ರಾಸನದಲ್ಲಿ ಕುಳ್ಳಿರ್ದು
ಷಡಕ್ಷರಿಯ ಜಪವ ಮಾಡುತ್ತಿಪ್ಪರು ಏಕೋರಾಮಯ್ಯದೇವರು
ಶಾಂತವೀರೇಶ್ವರಾ