Index   ವಚನ - 646    Search  
 
ಅಗ್ನಿಯ ದಿಕ್ಕಿನಲ್ಲಿ ಮಾಣಿಕ್ಯದ ಕಳಶ ಸೇವಂತಿಗೆಯ ಪುಷ್ಪದ ಪೂಜೆ ಚೂತಾಂಕುರದ ತಳಿರು ಗಂಗಾವತಿಯೆಂಬ ಗಂಗೆ ಕುಮಾರ ಪರ್ವತ ಮಂದಾರ ವೃಕ್ಷ ಸುರಭಿದೇನು ಅಗ್ನಿ ಭೂತ ವ್ಯಾನವಾಯು ಇಚ್ಛಾಶಕ್ತಿ ಅಘೋರ ವದನ ಯಜುರ್ವೇದ ಶಾಖೆ “ಓಂ ಪ್ರಣವಸ್ಯ ಪರಬ್ರಹ್ಮ ಋಷಿ ಪರಮಾತ್ಮ ದೇವತಾ ದೇವಿ” ಗಾಯಿತ್ರಿ ಛಂದ, ಪ್ರಾಣವಾಯುವಿನ ಯೋಗ. ‘ಓಂ ಭೂ ಯೇಕ’ ಎಂದು ಮಕಾರ ದೇಹ ತಾಮ್ರವರ್ಣ ಭಾರಧ್ವಾಜ ಗೋತ್ರ ಜಗತಿ ಛಂದ ‘ಶಿ’ಕಾರ ಬೀಜಾಕ್ಷರ ಪಂಚಾಕ್ಷರಿ ಮಂತ್ರ ಅಲ್ಲಿಯ ಆಚಾರ್ಯರು ಮರುಳಸಿದ್ಧಯ್ಯ ದೇವರು. ಆತನಂಗ ಕೃಷ್ಣವರ್ಣ ವ್ಯಾಘ್ರ ಜಿನಾಸನ ಧೂಮಧ್ವಜ ಬಾಹು ಶಿಖಿ ಅವಧೂತ ಮಾರ್ಗ ಕುಠಾರ ದಂಡ ವಿಚಾರ ಖರ್ಪರ ‘ತತ್ಕಾಲ ಪೂಣ್ಯ ಭಿಕ್ಷ’ವೆಂಬ ಶಬ್ದ ಕಬ್ಬುನದ ಎಡ ಮುರಿಯ ಮುದ್ರೆ ಭಾಳದಲ್ಲಿ ವಿಭೂತಿ ಕಂಠದಲ್ಲಿ ರುದ್ರಾಕ್ಷಮಾಲೆ ದಿವ್ಯ ದೇಹದಲ್ಲಿ ಯಜ್ಞೋಪವೀತ ಸುವರ್ಣದ ಅಗ್ನಿ ಮೂಲೆಯಲ್ಲಿ ಪುಲಿಯ ಚರ್ಮದ ಗದ್ದುಗೆ ಜಜ್ಜು ಗಂಥೆ ಸುಜ್ಞಾನವೆಂಬ ಸೂಜಿ ನಿರಂಹಕಾರ ದಾರ ಅಮಳೋಕ್ಯದಲ್ಲಿ ಧರಿಸಿದ ಪ್ರಾಣಲಿಂಗ ಕಪಿಲಸಿದ್ಧ ಮಲ್ಲಿಕಾರ್ಜುನದೇವರು ಅಘೋರ ಮುಖ, ದಕ್ಷಿಣದಿಕ್ಕು. ಪುಲಿಯ ವಾಹನ ಚರ್ಮದ ಗದ್ದುಗೆಯ ಮೇಲೆ ಕುಳ್ಳಿರ್ದು ಪಂಚಾಕ್ಷರಿಯ ಜಪಂಗೆಯ್ವರು ಮರಳುಸಿದ್ಧಯ್ಯದೇವರು ಶಾಂತವೀರೇಶ್ವರಾ