Index   ವಚನ - 650    Search  
 
ಆ ದೀಕ್ಷೆ ನಿರಾಧಾರ ದೀಕ್ಷೆ ಎಂದು ಸಾಧಾರ ದೀಕ್ಷೆ ಎಂದು ಎರಡು ಪ್ರಕಾರಮಿಪ್ಪುದು. ಅವರೊಳು ಶಿವನು ನಿರಧಿಕರಣನಾಗಿ ತೀವ್ರ ಶಕ್ತಿಪಾತದಿಂದ ವಿಜ್ಞಾನಕಲರು ಪ್ರಳಯಕಲರುಗಳಿಗೆ ಮಾಡುವ ದೀಕ್ಷೆ ನಿರಾಧಾರ ದೀಕ್ಷೆ ಎನಿಸಿಕೊಂಬುದು. ಗುರುಮೂರ್ತಿಉನಾಶ್ರಯಿಸಿ ಮಂದ ಶಕ್ತಿ ನಿಪಾತದಿಂದ ಸಕಲರುಗಳಿಗೆ ಮಾಡುವುದು ಸಾಧಾರದೀಕ್ಷೆ ಎನಿಸಿಕೊಂಬುದು ಶಾಂತವೀರೇಶ್ವರಾ