Index   ವಚನ - 652    Search  
 
ಮತ್ತಮಾ ಚಿರಂ ನಿರ್ವಾಣ ದೀಕ್ಷೆಯು, ಅಜ್ಞಾದೀಕ್ಷೆಯು ಉಪಮಾ ದೀಕ್ಷೆಯು, ಸ್ವಸ್ತಿಕಾರೋಹಣ, ವಿಭೂತಿಯ ಪಟ್ಟ ಕಲಿಕಾಭಿಷೇಕ, ಲಿಂಗಾಯತ, ಲಿಂಗ ಸ್ವಾಯತಂಗಳೆಂದು ಈ ಏಳನು ಕಾಯಕ್ಕುಪದೇಶವ ಮಾಡುವುದು. ಸಮಯ, ನಿಸ್ಸಂಸಾರ, ವಿರ್ವಾಣ ದೀಕ್ಷೆ, ತತ್ವದೀಕ್ಷೆ,ಆಧ್ಯಾತ್ಮ, ಅನುಗ್ರಹ ಸತ್ಯ ಶುದ್ಧ ಈ ಏಳನು ಪ್ರಾಣಕ್ಕುಪದೇಶವ ಮಾಡುವುದು ಮತ್ತಮಾ ಸಾಧಾರ ದೀಕ್ಷೆಯ ಸಹಜ ದೀಕ್ಷೆ ನಿರ್ಬೀಜ ದೀಕ್ಷೆ ಚಿನ್ಮಯ ದೀಕ್ಷೆ ಎಂದು ಮೂರು ಪ್ರಕಾರವು; ಅವು ಯಥಾ ಕ್ರಮದಿಂದ ಕರ್ಮಕಾಂಡ ಭಕ್ತಿಕಾಂಡಗಳಲ್ಲಿ ದೀಕ್ಷೆ ಎನಿಸಿಕೊಂಬುವು. ಅವರೊಳು ನಿರ್ಬೀಜ ದೀಕ್ಷೆಯೆ ಸದ್ಯೋನಿರ್ವಾಣ ದೀಕ್ಷೆ ಎಂದು, ಚಿರಂ ನಿರ್ವಾಣ ದೀಕ್ಷೆ ಎಂದು ಎರಡು ಭೇದ. ಅವರೊಳು ಅತ್ಯಂತ ವಿರಕ್ತವಾದ ಶಿಷ್ಯನ ಅನೇಕ ಭವಂಗಳಲ್ಲಿ ಮಾಡಿದ ಸಂಚಿತ ಕರ್ಮಂಗಳನು ಮತ್ತಮಾ ಸಂಚಿತಕರ್ಮ ರಾಶಿಯೊಳು ಆಗ ತಾಳಿರ್ದ ಶರೀರವಿಡಿದು ಅನುಭವಿಸುತ್ತಿರ್ದ ಪ್ರಾರಬ್ಧ ಕರ್ಮಂಗಳನುಂ ಮುಂದೆ ಭವಾಂತರದಲ್ಲಿ ಅನುಭವಿಸಲು ಆಗಾಮಿ ಕರ್ಮಂಗಳನು ಶೋಧಿಸಿ ಸದ್ಯೋನ್ಮುಕ್ತಿಯನೈದಿಸುವ ದೀಕ್ಷೆ ‘ಸದ್ಯೋ ನಿರ್ವಾಣ ದೀಕ್ಷೆ’ ಎನಿಸುವುದಯ್ಯ. ಏಕಾಗ್ರಚಿತ್ತ ದೃಢವ್ರತ ಪಂಚೇಂದ್ರಯಾರ್ಪಿತ ಅಹಿಂಸೆ ಲಿಂಗನಿಜ ಮನೋಲಯ ಸದ್ಯೋನ್ಮುಕ್ತಿ ಈ ಏಳನು ಮನಕ್ಕುಪದೇಶವ ಮಾಡುವುದಯ್ಯ ಶಾಂತವೀರೇಶ್ವರಾ