Index   ವಚನ - 655    Search  
 
ಮತ್ತಂ, ದೀಕ್ಷೆಯಿಂ ಸಮಸ್ತ ಪಾಶಂಗಳು ತೊಲಗಿ ಶರೀರ ಎಂತು ಸಂಭವಿಪುದೆಂಬ ಚೋದ್ಯಮಂ ದೃಷ್ಟಾಂತ ಪೂರ್ವಾಕವಾಗಿ ಪರಿಹರಿಸುತ್ತಿದ್ದಾನು. ಘಟ ನಿಷ್ಪತ್ತಿಯಾದರೂ ಮತ್ತೂ ಭ್ರಮಸುತ್ತರ್ದ ಕುಲಾಲಚಕ್ರವೆಂತೆಂತೆ ದೀಕ್ಷಾಯಾದರೂ ದೀಕ್ಷೋತ್ತರ ಕ್ರಿಯಾವಸಾನ ಪರ್ಯಂತರವಾಗಿ ಪ್ರಾರಬ್ಧ ಕರ್ಮ ವಾಸನೆಯಿಂದ ಶರೀರ ಶಾಂತಿ ಸಂಭವಿಪುದು. ಮತ್ತಂ, ಘಟದೊಳರ್ಗಿದ ದೀಪವು ಘಟ ಒಡೆಯಲಾಗಿ ಆ ದೀಪವು ಎಲ್ಲ ಕಡೆಯಲ್ಲಿಯ ಎಂತು ಪ್ರಕಾಶಿಸುವುದೊ ಅಂತೆ ದೀಕ್ಷತನು ದೇಹಾವಸಾನದಲ್ಲಿ ಪರಮ ಮುಕ್ತನಪ್ಪನಯ್ಯ ಶಾಂತವೀರೇಶ್ವರಾ