Index   ವಚನ - 674    Search  
 
ಮೂಲಾಧಾರ ಸಂಜ್ಞೆಯುಳ್ಳ ಪೂರ್ವ ಹೃದಯದಲ್ಲಿಯಾದರೂ ಚಿತ್ತ ಸಂಜ್ಞೆಯುಳ್ಳ ಮಧ್ಯ ಹೃದಯದಲ್ಲಿಯಾದರೂ ಭ್ರೂಮಧ್ಯ ಸಂಜ್ಞೆಯುಳ್ಳ ಊರ್ಧ್ವ ಹೃದಯದಲ್ಲಿಯಾದರೂ ದೀಪೋಪಮಾನ ಉಳ್ಳ ಅತ್ಯಂತ ನಿರ್ಮಲವಾದ ಪ್ರಾಣಲಿಂಗವನು ಭಾವ ವಸ್ತುಗಳಿಂದವೆ ಆವಾತನು ಪೂಜಿಸುವನು ಆತನು ಶಿವಯೋಗಿಯಯ್ಯ ಶಾಂತವೀರೇಶ್ವರಾ