Index   ವಚನ - 679    Search  
 
ಪರಕ್ಕೆ ಪರವಾಗಿರ್ದ ಪರಮಾನಂದವೆ ಸ್ವರೂಪವಾಗುಳ್ಳ ಪರಶಿವನೆಂಬ ಹೆಸರುಳ್ಳ ಆವುದಾನೊಂದು ಪರಬ್ರಹ್ಮವನು ಯಾರು ಅರಿಯುವರೊ ಆತನೆ ಜ್ಞಾನಲಿಂಗಿ ಎಂದು ಹೇಳುವರಯ್ಯ. ಬಳಿಕ ಜ್ಞಾನಲಿಂಗಿಯೇ ಪರ ಮುಕ್ತನೆಂದು ಪೇಳುವರಯ್ಯ ಶಾಂತವೀರೇಶ್ವರಾ