Index   ವಚನ - 678    Search  
 
ಕಂಡುದನೆ ಕಾಣಬೇಕಲ್ಲದೆ ಕಾಣದುದನರಿಸದೊಡೆ ಬರಿಯ ಭ್ರಮೆ ಕಾಣಿರಣ್ಣಾ! ಅದೆಂತೆಂದೊಡೆ, ಆ ಇಷ್ಟಲಿಂಗದಧಃಪೀಠದಲ್ಲಿ ಭಕ್ತಸ್ಥಲ ಹದಿನೈದು ಪೃಥ್ವಿ, ಆಚಾರಲಿಂಗ ಸಂಬಂಧ. ಕಟಿಯಲ್ಲಿ ಮಾಹೇಶ್ವರಸ್ಥಲ ಒಂಬತ್ತು ಜಲ, ಗುರುಲಿಂಗ ಸಂಬಂಧ. ವೃತ್ತದಲ್ಲಿ ಪ್ರಸಾದಿ ಸ್ಥಲವೇಳು. ಅಗ್ನಿ, ಶಿವಲಿಂಗ ಸಂಬಂಧ. ಗೋಮುಖದಲ್ಲಿ ಪ್ರಾಣಲಿಗಿಸ್ಥಲವೈದು. ವಾಯು, ಜಂಗಮಲಿಂಗ ಸಂಬಂಧ ನಾಳದಲ್ಲಿ ಶರಣಸ್ಥಲ ನಾಲ್ಕು. [ಆಕಾಶ], ಪ್ರಸಾದಲಿಂಗ ಸಂಬಂಧ. ಗೋಳಕದಲ್ಲಿ ಐಕ್ಯಸ್ಥಲ ನಾಲ್ಕು. ಮಹಾಲಿಂಗ ಸಂಬಂಧವೆಂದರಿದಾತನೆ ಜ್ಞಾನಲಿಂಗಿಯಯ್ಯ ಶಾಂತವೀರೇಶ್ವರಾ