ಕಾಮಾದಿ ಅರಿಷಡ್ವರ್ಗ ಚಿತ್ತಾದಿ ಷಟ್ಕರಣ
ಅವಿದ್ಯಾದಿ ಪಂಚಕ್ಲೇಶಂಗಳನು ಬಿಟ್ಟು ಭಿಕ್ಷಾಹಾರಿಯಾಗಿ
ಸರ್ವರಲ್ಲಿಯೂ ಸಮಾನವಾದ ಬುದ್ಧಿಯುಳ್ಳ ಯತೀಶ್ವರನು
ಸ್ವಯಲಿಂಗ ಸಂಜ್ಞೆಯುಳ್ಳ ಯತೀಶ್ವರನು
ಪರ ಮುಕ್ತಂಗೆ ಸದೃಶ್ಯವಾದಾತನು
ಯಥಾಲಾಭ ಸಂತುಷ್ಟನಾಗಿರ್ದ
ಭಸ್ಮೋದ್ಧೂಳನಾದಿಗಳಲ್ಲಿ ನಿಷ್ಠಯುಳ್ಳ
ಜತೇಂದ್ರಿಯನಾಗಿರ್ದ ಸ್ವಯಂಲಿಂಗವಾದ ಯೋಗೀಶ್ವರನು
ಭಿಕ್ಷುಕನಾಗಿರ್ದರೂ ರಾಜನಾದರೂ
ಸಮಾನವಾದ ಬುದ್ಧಿ ವರ್ತನೆ ಉಳ್ಳಾತನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Kāmādi ariṣaḍvarga cittādi ṣaṭkaraṇa
avidyādi pan̄caklēśaṅgaḷanu biṭṭu bhikṣāhāriyāgi
sarvaralliyū samānavāda bud'dhiyuḷḷa yatīśvaranu
svayaliṅga san̄jñeyuḷḷa yatīśvaranu
para muktaṅge sadr̥śyavādātanu
yathālābha santuṣṭanāgirda
bhasmōd'dhūḷanādigaḷalli niṣṭhayuḷḷa
jatēndriyanāgirda svayanliṅgavāda yōgīśvaranu
bhikṣukanāgirdarū rājanādarū
samānavāda bud'dhi vartane uḷḷātanayya
śāntavīrēśvarā