ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದಿರಲ್ಲಾ.
ಅಂಗಸಂಗಿಗಳೆಲ್ಲ ಮಹಾಘನವನರಿಯದೆ ನಿಂದಿರೊ!
ಹುಸಿಯನೆ ಕೊಯ್ದು ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರಾ.
Transliteration Oḍaluviḍidu pāṣāṇakke haṅgigarādirallā.
Aṅgasaṅgigaḷella mahāghanavanariyade nindiro!
Husiyane koydu husiyane pūjisi
gasaṇigoḷagādaru guhēśvarā.
Hindi Translation शरीर से आसक्त होकर पाषाण का कृतज्ञ बन गये।
सब अंग संगी महाघन को जानना भूल गये।
मिथ्या को काटकर, मिथ्या को पूजाकर के
संकट में पड़ गये गुहेश्वरा।
Translated by: Eswara Sharma M and Govindarao B N
Tamil Translation உடலை நயந்து கற்சிலையை விரும்பினீரன்றோ
உடலை நயந்தவரெலாம் கடவுளை அறியாமலகன்றனர்
பொய்யையே கொய்து, பொய்யையே பூஜித்து
உலகியல் துன்பத்தில் உழன்றனர் குஹேசுவரனே.
Translated by: Smt. Kalyani Venkataraman, Chennai
ಶಬ್ದಾರ್ಥಗಳು ಅಂಗಸಂಗಿಗಳು = ಅಂಗದಲ್ಲಿ ಆಸಕ್ತರು; ಒಡಲುವಿಡಿದು = ದೇಹದಲ್ಲಿ ಆಸಕ್ತಿ ತಾಳಿ, ದೇಹಭೋಗಕ್ಕಾಗಿ; ಗಸಣಿಗೆ = ಸಾಂಸಾರಿಕ ಕೋಟಲೆಗೆ; ಪಾಷಾಣಕ್ಕೆ = ಶಿವಾಲಿಂಗಕ್ಕೆ; ಹಂಗಿಗರಾದಿರಿ = ಅಧೀನರಾದಿರಿ;
Written by: Sri Siddeswara Swamiji, Vijayapura