Index   ವಚನ - 692    Search  
 
ಆಧ್ಯಾತ್ಮಿಕ ಆಧಿದೈವಿಕ ಆಧಿ ಭೌತಿಕವೆಂಬ ಮಹಾ ಹ್ರದದಲ್ಲಿ ಕೆಡೆಯದೆ ವಿಷಯಂಗಳೆಂಬ ಕಂಟಕಂಗಳನು ತುಳಿಯದೆ, ಅಸೂಯೆ ಎಂಬ ವಿಷ ಲತೆಯನು ಶೋಷಣಂಗೆಯ್ದು ಅಹಂಕಾರವೆಂಬ ಹ್ರದದಲ್ಲಿ ಮುಳುಗದೆ, ಸಮಸ್ತ ಉಪದ್ರವಂಗಳನು ಸ್ವ ಆತ್ಮಜ್ಞಾನದಿಂದ ವಿಸರ್ಜಿಸಿ ತತ್ತ್ವ ಜ್ಞಾನಿಯಾದಾತನೆ ಚರಮೂರ್ತಿಯು ಶಾಂತವೀರೇಶ್ವರಾ