Index   ವಚನ - 691    Search  
 
ಮನುಷ್ಯ ಚರ್ಮಾವೃತ್ತವಾದ ಚರಮೂರ್ತಿಯು ಲುಬ್ಧತ್ವವೆಂಬ ಮುಳ್ಳನು ಮುಟ್ಟದೆ, ಹೃಷೀಕಂಗಳಲ್ಲಿ ಲಂಪಟವಿಲ್ಲದೆ, ಕಾಮಾದಿ ಅರಿಷಡ್ವರ್ಗಂಗಳನು ಜಯಿಸಿ, ಮೋಹವೆಂಬ ಮಹಾಪಿಶಾಚಿಯನು, ಕ್ರೋಧವೆಂಬ ಕಿರುಬುಲಿಯನು ಮಮತೆ ಎಂಬ ಹೆಣ್ಣು ಹಾವನು ಮನ್ಮಥನೆಂಬ ಕಳ್ಳರನು ಸಂಹರಿಸಿ ಮದವೆಂಬ ಅಂಧಕಾರದಲ್ಲಿ ಚರಿಸದಾತನೆ ಚರಮೂರ್ತಿಯಯ್ಯ ಶಾಂತವೀರೇಶ್ವರಾ