ಕಂಥೆ ಖಟ್ಟಾಂಗ ದಂಡ ಕಮಂಡಲ ಗುಂಡಿಗಪ್ಪರ ಜೋಳಿಗೆ
ಕಮಾಕ್ಷ ಇವು ಪಂಚಮುದ್ರೆ,
ಪರಿಪೂರ್ಣ ಜಂಗಮಸ್ಥಲವೆಂದು ಹೇಳುವರಯ್ಯ
ಜೀವ ಹೋಗಿ ಕಾಯ ಕಂಥೆ ಕಡೆದು ಹೋದ ಬಳಿಕ
ಬಿಟ್ಟು ಹೋದ ಪ್ರಾಣಕ್ಕೆ ಆವ ಕಂಥೆ ಖಟ್ಟಾಂಗ
ದಂಡ ಕಮಂಡಲ ಗುಂಡಿಗಪ್ಪರ ಜೋಳಿಗೆ
ಕಮಾಕ್ಷಂಗಳಾದವಯ್ಯ? ಈ ವಿಚಾರ
ಬಲ್ಲರೆ ಜಂಗಮವೆಂಬೆನಯ್ಯ ಶಾಂತವೀರೇಶ್ವರಾ