ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬೇಡಲೇತಕೆ?
ಜಾತಿಗೋತ್ರವನೆತ್ತಿ ನುಡಿಯಲೇತಕ್ಕೆ!?
ಸಹಜ ಶಿವಭಕ್ತರೆಂದು ಶೀಲವಂತ ವ್ರತಾಚಾರಿಗಳೆಂದು
ವ್ರತಭ್ರಷ್ಟರೆಂದು ಅವರ ಕುಲವ ಕೇಳಿಕೊ[ಳ್ಳಲೇತಕೆ?]….
ಅನಾಚಾರಿಗಳೆಂದು ಭಿಕ್ಷವ ಬೇಡಲೇತಕೆ?
ಮದ್ಯ ಮಾಂಸವ ಭುಂಜಿಸುವುರು ಅನಾಚಾರಿಗಳು,
ಆವ ಕುಲವಾದಡೇನು ಅಂಗದ ಮೇಲೆ ಲಿಂಗ ಉಳ್ಳವರೆಲ್ಲರು
ಆಚಾರ ಉಳ್ಳವರೆಂದು ಭಕ್ತಿ ಭಿಕ್ಷವ ಬೇಡವುದಯ್ಯ
ಶಾಂತವೀರೇಶ್ವರಾ