Index   ವಚನ - 704    Search  
 
ಸದಾಶಿವನಂಬ ತತ್ತ್ವಕ್ಕೆ ಆವುದಾನೊಂದು ಶ್ರೇಷ್ಠವಾಗಿಹ ಸ್ಥಾನವಾಗಿ ಅಚಲವೆ ಆದ ಆ ಲಿಂಗವೆಯಾದ ಈ ಲಿಂಗತತ್ತ್ವವು ಪರಜಂಗಮಲಿಂಗವೆಂದು ಹೇಳುವರಯ್ಯ ಶಾಂತವೀರೇಶ್ವರಾ