ಶಿವಯೋಗೀಶ್ವರನು ದಿಗಂಬರನಾಗಿ,
ನಮಸ್ಕಾರರಹಿತನಾಗಿ, ಪಿತೃಕರ್ಮರಹಿತನಾಗಿ,
ನಿಂದಾಸ್ತುತಿರಹಿತನಾಗಿ,ಉದೃಚ್ಛಾಲಾಭಸಂತುಷ್ಟನಾಗಿ
ಆವಾಹನವನಪೇಕ್ಷಿಸದೆ, ವಿಸರ್ಜನವನು ನೆನೆಯದೆ,
ಮಂತ್ರವನುಪೇಕ್ಷಿಸದೆ, ಧ್ಯಾನವಿಲ್ಲದೆ,
ಉಪಾಸಿಸುವ ದೇವರು ಇಲ್ಲದೆ,
ಲಕ್ಷಿಸತಕ್ಕುದೂ ಇಲ್ಲದೆ, ಅಲಕ್ಷಿಸತಕ್ಕುದು ಇಲ್ಲದೆ,
ಬೇರಾದುದು ಇಲ್ಲದೆ, ಬೇರಲ್ಲದುದೂ ಇಲ್ಲದೆ,
ಎಲ್ಲಾಕಡೆಯಲ್ಲಿಯೂ ನಿಯಮಿಸಲಾದ
ಸ್ಥಾನಾದಿ ಸ್ಥಾನ ಇಲ್ಲದವನೆ
ಪರಜಂಗಮವಾದ ಭಿಕ್ಷಾಹಾರಿ ಎನಿಸುವನಯ್ಯ
ಶಾಂತವೀರೇಶ್ವರಾ
Art
Manuscript
Music
Courtesy:
Transliteration
Śivayōgīśvaranu digambaranāgi,
namaskārarahitanāgi, pitr̥karmarahitanāgi,
nindāstutirahitanāgi,udr̥cchālābhasantuṣṭanāgi
āvāhanavanapēkṣisade, visarjanavanu neneyade,
mantravanupēkṣisade, dhyānavillade,
upāsisuva dēvaru illade,
lakṣisatakkudū illade, alakṣisatakkudu illade,
bērādudu illade, bēralladudū illade,
ellākaḍeyalliyū niyamisalāda
sthānādi sthāna illadavane
parajaṅgamavāda bhikṣāhāri enisuvanayya
śāntavīrēśvarā