Index   ವಚನ - 706    Search  
 
ಶಿವನು ಲಿಂಗವು ಅಹನು, ಅಂಗವು ಕ್ಷೇತ್ರವು ಕೂಟವು ಆಶ್ರಮವು ಅಹನು. ಅದು ಕಾರಣ ಲಿಂಗಾಂಗದೊಡನೆ ಕೂಡಿದಂಥವನು ವರ್ಣಾಶ್ರಮಾತೀತನಾದ ಪರಜಂಗಮವಯ್ಯ ಶಾಂತವೀರೇಶ್ವರಾ