Index   ವಚನ - 707    Search  
 
ಲಲಾಟದೊಳಗಣ ಅಸ್ಥಿಯ ಬಿಳುಪೆ ವಿಭೂತಿ ಚರ್ಮದೊಳದಾಣ ಕೆಂಪು ಕಿಸು ಕಾಷಾಂಬರ ವ್ಯಾಕುಲವಿಲ್ಲದುದೆ ಲಾಕುಳ ಮಹದೇವನ ನೆನೆವುದೆ ಆಧಾರ ನಿರ್ಮೋಹವೆ ಕೌಪೀನ ನಿಸ್ಸಂಗತ್ವವೆ ಕಟಿಸೂತ್ರ ಶಾಂತಿಯೆ ಯಜ್ಞೋಪವೀತ ದಯಾಪರತ್ವವೆ ಆಧಾರವು ಪಂಚೇಂದ್ರಿಯರಹಿತತ್ವವೆ ದಂಡವು ಈ ಪಂಚ ಮುದ್ರೆಗಳೆಂಬ ಚಿಹ್ನೆಗಳೊಡನೆ ಕೂಡಿರ್ದುದೆ ಪರಜಂಗಮಸ್ಥಲವಯ್ಯ ಶಾಂತವೀರೇಶ್ವರಾ