ಗುರುಲಿಂಗಮಜಂಗಮ ಭಕ್ತಿ ಎಂಬುದು ಅಲಗಿನ ಮೊನೆ;
ತನು ಮನ ಧನದಲ್ಲಿ ವಂಚನೆ ಇಲ್ಲದ
ಕಣ್ಣಪ್ಪ ಸಿರಯಾಳ ಸಿಂಧುಬಲ್ಲಾಳ
ಮೋಳಿಗೆ ಮಾರಯ್ಯಂಗಲ್ಲದೆ ಸಾಧ್ಯವಾಗದು.
ವೀರಶೈವಾಚಾರ ಸಂಪನ್ನರಾದ
ಜಗದೇವ ಮಲ್ಲಯ್ಯ ಬೋಮ್ಮಣ್ಣಂಗಲ್ಲದೆ ಅಳವಡದು.
ಸೊಡ್ಡಳ ಬಾಚಾಯ್ಯ ಕಿನ್ನರಿ ಬೊಮ್ಮಯ್ಯ
ಏಕಾಂತ ರಾಮಯ್ಯಂಗಲ್ಲದೆ ಲಿಂಗನಿಷ್ಠೆಯು ದೊರೆಯದು.
ಬಿಬ್ಬ ಬಾಚಯ್ಯಂಗಲ್ಲದೆ ಪ್ರಸಾದ ನಿಷ್ಠೆಯು ಇಲ್ಲ.
ಬಸವೇಶ್ವರಂಗಲ್ಲದೆ ಪ್ರಾಣತ್ವವಾಗದು.
ತಂಗಟೂರ ಮಾರಯ್ಯಂಗಲ್ಲದೆ
ಪ್ರಾಣಲಿಂಗ ತತ್ತ್ವವಿಲ್ಲವಯ್ಯ ಶಾಂತವೀರೇಶ್ವರಾ
Art
Manuscript
Music
Courtesy:
Transliteration
Guruliṅgamajaṅgama bhakti embudu alagina mone;
tanu mana dhanadalli van̄cane illada
kaṇṇappa sirayāḷa sindhuballāḷa
mōḷige mārayyaṅgallade sādhyavāgadu.
Vīraśaivācāra sampannarāda
jagadēva mallayya bōm'maṇṇaṅgallade aḷavaḍadu.
Soḍḍaḷa bācāyya kinnari bom'mayya
ēkānta rāmayyaṅgallade liṅganiṣṭheyu doreyadu.
Bibba bācayyaṅgallade prasāda niṣṭheyu illa.
Basavēśvaraṅgallade prāṇatvavāgadu.
Taṅgaṭūra mārayyaṅgallade
prāṇaliṅga tattvavillavayya śāntavīrēśvarā